Saturday, December 15, 2007

ಸ್ಟ್ರುತಿಯೊನಿಫೊರ್ಮ್‍ಸ್ (Struthioniformes)

ಸನ್ನಿವೇಲ್‌ಗೆ ಬಂದು ಸುಮಾರು ೪ ತಿಂಗಳು ಗಳಾಗಿದ್ದವು, ಪ್ರಾಜೆಕ್ಟ್ ನಲ್ಲಿ ಯಾವುದೊ ಒಂದು ಮೈಲಿಗಲ್ಲು ಮುಟ್ಟಬೇಕಾದ್ದರಿಂದ ಶನಿವಾರ ಎಲ್ಲರನ್ನು ಆಫೀಸಿಗೆ ಬರಹೆಳಲಾಗಿತ್ತು. ಮಿಲ್ಪಿಟಾಸ್ ನಲ್ಲಿದ್ದ ನನ್ನ ಆಫೀಸಿಗೆ ಬಸ್ಸಿನಲ್ಲಿ ತಲುಪಲು ಸುಮಾರು ೧ ಗಂಟೆ ೩೦ ನಿಮಿಷಗಳಷ್ಟು ಕಾಲಾವಕಾಶಬೇಕು. ಅಕ್ಟೊಬರ್‍ ತಿಂಗಳಿದ್ದರಬಹುದು, ಬೇಸಿಗೆ ಕಳೆದು ಆಗತಾನೆ ಚಳಿಗಾಲದ ಪ್ರಾರಂಭವಾಗುತ್ತಿತ್ತು. ಬೆಳಿಗ್ಗೆ ೭.೧೫ ಕ್ಕೆ "ಎಲ್ ಕಮಿನೊ ರಿಯಾಲ್" ರಸ್ತೆಗೆ ಬಂದು ಬಸ್ ಗಾಗಿ ಕಾಯ್ತುತ್ತ ನಿಂತಿದ್ದೆ, ಆಕಾಶದಲ್ಲಿ ಮೊಡಕವಿದಿದ್ದು ಸೂರ್ಯನ ಸುಳಿವು ಇರಲಿಲ್ಲ. ಗಾಳಿಯು ಜೊರಾಗೆ ಬೀಸುತಿತ್ತು ಜಾಕೆಟ್ ಹಾಕಿಕೊಂಡಿದ್ದರು ಸ್ವಲ್ಪ ನಡುಗುತ್ತಿದ್ದೆ, ಶನಿವಾರ ಬೆಳಿಗ್ಗೆಯಾದರಿಂದ ರಸ್ತೆಯಲ್ಲಿ ವಾಹನಗಳ ಒಡಾಟವು ಹೆಚ್ಚಿರಲಿಲ್ಲ. ನೀಲಿ ಬಣ್ಣದ ಕಾರೊಂದು ನನ್ನಮುಂದೆ ಹಾದು ಹೊಗಿ ಹಿಂದಿನ ಪಾರ್ಕಿಂಗ್ ಲಾಟ್ ನಲ್ಲಿ ನಿಂತಿತು, ಸುಮಾರು ೩೨ ~ ೩೫ ರ ಪ್ರಾಯದ ವ್ಯಕ್ತಿಯೊಬ್ಬ ಆ ಕಾರ್‍ ನಿಂದ ಇಳಿದು ನನ್ನೆಡೆ ನಡೆದು ಬಂದ, ಆತ ಶುಭ್ರ ವಾಗಿ ಕಾಣುವ ಉಡುಪು ಗಳನ್ನು ಧರಿಸಿ ಅದರಮೇಲೆ ಮಂಡಿಯವರೆಗೆ ಬರುವಂತಹ ಉದ್ದನೆಯ ಕಪ್ಪುಬಣ್ಣದ ಕೊಟ್ ಹಾಕಿ ಕೊಂಡಿದ್ದ. ಆ ವ್ಯಕ್ತಿ ನನ್ನನು ಸಮೀಪಿಸುತ್ತಿದ್ದಂತೆ ಮಾತನಾರಂಭಿಸಿದ,
ವ್ಯಕ್ತಿ:- ಶುಭೊದಯ ಮಹಾಶಯರಿಗೆ
ನಾನು:- ಧನ್ಯವಾದ, ತಮಗು ಶುಭೊದಯ.
ವ್ಯಕ್ತಿ:- ಹೇಗಿದ್ದೀರಿ?
ನಾನು:- ಚೆನಾಗಿದ್ದೀನಿ, ನೀವು ಹೇಗಿದ್ದೀರಿ?
ವ್ಯಕ್ತಿ:- ದೇವರ ಕೃಪೆ, ನಾನು ಚೆನ್ನಾಗಿದ್ದೀನಿ.
ವ್ಯಕ್ತಿ:- ತುಂಬ ಚಳಿ ಇದೆ ಅಲ್ಲವೇ?
ನಾನು:- ಹೌದು.
ವ್ಯಕ್ತಿ:- ನಶಿಸಿ ಹೋಗುತ್ತಿರುವ ಪಕ್ಷಿಗಳ ಬಗೆಗಿನ ಪ್ರಮುಖ ವಿವರಣೆಗಳಿರುವ ಹೆಚ್ಚು ಪುಸಕಗಳಿಲ್ಲ, ಇಗೊ ನೋಡಿ ನನ್ನಲ್ಲಿ ಈ ವಿಷಯದ ಬಗ್ಗೆ ಮಾಹಿತಿಯಿರುವ ಉತ್ತಮ ಪುಸ್ತಕವೊಂದಿದೆ, ಇದನ್ನು ಓದಿ, ಇದು ಉಚಿತ.
ಈ ಮಾತುಗಳು ಅವನ ಬಾಯಿಯಿಂದ ಹೊರಡುತ್ತಲೆ ನನ್ನಮನದಲ್ಲಿ ಹಲವು ಬಗೆಯ ಅನುಮಾನ, ಊಹ ಪೊಹೆಗಳು ಶುರುವಾದವು, ಇವನ ಉದ್ದೇಶವೇನಿರ ಬಹುದು, ಇವನೇನು ಹಣ ಕೇಳಲು ಬಂದಿರುವವನೆ, ಇವನನ್ನು ಹೇಗೆ ಸಾಗಿ ಹಾಕುವುದು, ಅಥವಾ ಯಾವುದಾದರು ಎನ್. ಜಿ. ಓ. ಕಾರ್ಯಕರ್ತನೇ....ಅವನು ಉಚಿತ ಎಂದಾಗ ಮನಸ್ಸು ಸ್ವಲ್ಪ ನೆಮ್ಮದಿಯಾದರು, ನನ್ನ ಮನದಲ್ಲೇಳುತ್ತಿದ್ದ ಹಲವಾರು ಪ್ರಶ್ನೆಗಳು ಹಾಗೆ ಉಳಿದಿದ್ದವು.
ಆ ವ್ಯಕ್ತಿ, ಸುಮರು ೩೦ - ೪೦ ಹಾಳೆಯ ಮಯೂರ ಪುಸ್ತಕದಷ್ಟು ಅಳತೆ ಇರುವ ಪುಸ್ತಕವನ್ನು ನನ್ನ ಕೈಗಿತ್ತು, ನಿಮ್ಮ ದಿನ ಒಳ್ಳೆಯದಾಗಿರಲೆಂದು ಹಾರಯ್ಸಿ ಬೀಳ್ಕೊಟ.
ನಾನು ಅರೆಚಕಿತನಾಗಿ, ಏನಿರಬಹುದು ಆ ಪುಸ್ತಕದಲ್ಲಿ ಎಂದು ಒಂದೊಂದೆ ಹಾಳೆಗಳನ್ನು ತಿರುವಲು ಶುರುಮಾಡಿದೆ, ಕೆಲವು ಪಕ್ಷಿಗಳ ಚಿತ್ರಗಳಿದ್ದವು ಅದರಬಗ್ಗೆ ಸ್ವಲ್ಪ ಮಾಹಿತಿಯು ಪ್ರಕಟವಾಗಿತ್ತು. ಹೀಗೆ ಹಾಳೆಗಳನ್ನು ತಿರುಗುತ್ತಿದ್ದಾಗ ಅರೆ ಇದೇನಿದು ಪುಸ್ತಕದ ಮಧ್ಯದಲ್ಲಿ ಮತ್ತೊಂದು ಪುಸ್ತಕ, ಮೊದಲಿಗೆ ಅಯ್ಯೊ ಮರೆತು ಎರಡು ಪುಸ್ತಕವನ್ನಿತ್ತರ ಬಹುದೆಂದು ಆ ಎರಡನೆಯ ಪುಸಕವನ್ನು ಹೊರತೆಗೆದು ನೋಡಿದಾಗ ಅದೊಂದು ಧರ್ಮ ಹಾಗು ಅದರ ಸದ್ಗುಣವನ್ನು ಹಾಡಿ ಹೋಗಳುವ ಪುಸ್ತಕವಾಗಿತ್ತು. ಇದೊಂದು ಧರ್ಮ ಪ್ರಚಾರದ ವೈಖರಿ ಎಂದು ತಿಳಿಯಲು ಹೆಚ್ಚು ಸಮಯವಾಗಲಿಲ್ಲ. ಆ ಪುಸ್ತಕಗಳನ್ನು ಸುತ್ತಿ ಕೈಲ್ಲಿ ಹಿಡಿದು, ಕೈಗಳೆರಡನ್ನು ಮಡಿಸಿ ಕೊಂಡು ಮತ್ತೆ ಚಳಿಯಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತೆ.
ಕೆಲವು ನಿಮಿಷಗಳ ನಂತರ ಮತ್ತೊಂದು ಕಾರ್ ಬಂದು ಅದೇ ಪಾರ್ಕಿಂಗ್ ಲಾಟ್ ನಲ್ಲಿ ನಿಂತಿತು, ಅದರಿಂದಿಳಿದ ಮಹಿಳೆ ಅದೇ ಪುಸ್ತಕ ನನ್ನ ಮುಂದಿಟ್ಟು ನಿಮಗೆ ಪುಸ್ತಕ ಓದುವ ಹವ್ಯಾಸ ವಿದೆಯೆ? ಎಂದು ಕೆಳಿದಳು.
ನಾನು ಮಡಿಸಿದ್ದ ಕೈಗಳನ್ನು ಬಿಡಿಸಿ ನನ್ನ ಬಳಿಯಿದ್ದ ಪುಸ್ತಕವನ್ನಾಕೆಗೆ ತೊರಿಸಿದೆ. ನಿಮ್ಮ ಮಿತ್ರರಿಗೆ ಕೋಡಲು ಬೇಕಾದರೆ ಈ ಪ್ರತಿಯನ್ನು ಇಟ್ಟು ಕೊಳ್ಳಿ ಎಂದಳು, ಅಷ್ಟರಲ್ಲಿ ನಾನು ಹೊಗಬೇಕಾದ ಬಸ್ ಬಂದಿತು, ನಾ ಆಕೆಗೆ ಬೇಡ ಧನ್ಯವಾದ ಗಳನ್ನು ತಿಳಿಸಿ ಬಸ್ಸ್ ಹತ್ತಿದೆ.
ಕಿಟಕಿಯ ಹೊರಗಡೆ ವೀಕ್ಷಿಸುತ್ತ ಇದೇ ವಿಚಾರದಬಗ್ಗೆ ಆಲೊಚಿಸುತ್ತ ಕುಳಿತೆ, ಭಾರತದಂತ ಮುಂದುವರಿಯುತ್ತಿರುವ ದೇಶದಿಂದ ಬಂದ ನನಗೆ, ಈ ವಿಚಾರದಲ್ಲಿ ಮುಂದುವರಿದ ದೇಶದ ಬಗೆಗೆ ಸಂಪೂರ್ಣವಾಗಿ ಬೇರೆಯೆ ತರಹದ ಕಲ್ಪನೆಗಳಿದ್ದವು. ಈ ಘಟನೆಯು ನನ್ನ ಕಣ್ಣುಗಳ ಪೊರೆ ಕಳಚಿ ಸತ್ಯದ ಜಗತ್ತಿಗೆ ಸ್ವಾಗತ ಕೋರಿತು.

1 comment:

santhosh said...

ಹೌದು, ಯಾವುದೇ ಅಪೀಕ್ಷೆ ಅಥವಾ ಉದ್ದೇಶವಿಲ್ಲದೆ ಯಾರೂ ಕೂಡ ಪರರಿಗೆ ಸಹಾಯ ಮಾಡುವುದಿಲ್ಲ... ರಾಷ್ಟ್ರ ಮುಂದುವರೆದಿದ್ದರೂ ಕೂಡ ಜನರಲ್ಲಿ ಉದಾರ ಭಾವ ಇರುವುದು ಬಹಳ ವಿರಳ. ಅಂದಹಾಗೆ, ಈ ಕಥೆಯನ್ನು ಓದಿದಮೇಲೆ, ಲಾಲ್ಬಾಗ್ ನಲ್ಲಿ ನಡೆದ ಒಂದು ಘಟನೆ ಗ್ನ್ಯಾಪಕ ಬಂತು. ಹೀಗೆ ಒಂದು ಭಾನುವಾರದ ಮುಂಜಾನೆ, ನಾನು ಮತ್ತು ರವಿ jogging ಮಾಡುತ್ತಾ ಬರುತ್ತಿದ್ದಾಗ ಒಬ್ಬ ನಮ್ಮತ್ತ ಬಂದು jogging ಮುಗಿಸಿದ ನಂತರ ತನ್ನನ್ನು ಭೇಟಿ ಮಾಡಲು ಕೋರಿದ. ನಂತರ ಅವನನ್ನು ಭೇಟಿ ಮಾಡಿದಾಗ ಡಯಾಬಿಟಿಸ್ ಮತ್ತು ಇನ್ನಿತರ ರೋಗಗಳ ಬಗ್ಗೆ ಒಂದು power-point presentation ತೋರಿಸಿ, ಇವನ್ನೆಲ್ಲ ತಡೆಗಟ್ಟಬೇಕಾದರೆ ನಮ್ಮ company ಯ ಓಶದಗಳನ್ನು ಉಪಯೋಗಿಸಿ - ಇಲ್ಲದಿದ್ದರೆ, ನಿಮ್ಮ ದುರಾಂತ್ಯ ನಿಶ್ಚಿತ ಅಂಬೋ ರೀತಿಯಲ್ಲಿ ಹೇಳಿ, ಅಲ್ಲೇ ಓಸ್ಹ್ದ್ಗಳನ್ನು ಮಾರಲು ಯತ್ನಿಸಿದ... ನಾವು ಜೇಬು ಓಡಾಡಿ "ಇಲ್ಲಪ್ಪ, ನಮ್ಮ ಹತ್ತಿರ ನಾಲ್ಕಾಣೆಯೂ ಇಲ್ಲ" ಎಂದು ಹೇಳಿ ಮನೆ ಕಡೆ ನಡೆದೆವು!